ನೋಡಲಿಲ್ಲದ ಬಯಲು, ಸೂಡಲಿಲ್ಲದ ಬಯಲು,
ಕೂಡಲಿಲ್ಲದ ಬಯಲು,
ನಾಮವಿಲ್ಲದ ಬಯಲು,
ಸೀಮೆಯಿಲ್ಲದ ಬಯಲು,
ಕಾರ್ಯವಿಲ್ಲದ ಬಯಲು,
ಕಾರಣವಿಲ್ಲದ ಬಯಲು,
ಅಖಂಡೇಶ್ವರನೆಂಬ ಬಯಲಿನ ಬಯಲು
ಮಹಾಬಯಲೊಳಗೆ ನಾನೆತ್ತ ಹೋದೆನೆಂದರಿಯೆ.
Art
Manuscript
Music
Courtesy:
Transliteration
Nōḍalillada bayalu, sūḍalillada bayalu,
kūḍalillada bayalu,
nāmavillada bayalu,
sīmeyillada bayalu,
kāryavillada bayalu,
kāraṇavillada bayalu,
akhaṇḍēśvaranemba bayalina bayalu
mahābayaloḷage nānetta hōdenendariye.