Index   ವಚನ - 116    Search  
 
ಏಳುವ್ಯಸನಂಗಳೆಂಬ ಕಾಳುವಿಷಯಕ್ಕೆನ್ನ ಮೇಳವಿಸಿ ಕಾಡುತಿದೆ. ಅದು ಎಂತೆಂದೊಡೆ: ವಿಪಿನದೊಳು ಹೋಗುವ ಮನುಜರ ಕಣ್ಣಿಂಗೆ ಕೋಮಳದ ಹೂವಿನಂತಿದ್ದು, ಮೋಹಿಸಿ ನೆಗವಿದವರ ಹೀರುವ ಪಾಪಿಕೂಸಿನಂತೆ, ಎನ್ನ ಹೀರಿ ಹಿಪ್ಪೆಯಮಾಡಿ ಕಾಡುತಿವೆ. ಇವ ನಿರಸನವ ಮಾಡುವ ಮೋಹಿಗಳನಾರನೂ ಕಾಣೆನಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.