Index   ವಚನ - 204    Search  
 
ಗುರುವೆಂಬೆರಡಕ್ಷರವು ಹರನಾಮವಲ್ಲದೆ ನರನಾಮವೇನಯ್ಯಾ? ನರರ ನಾಮವೆನಲಾಗದು. ಗಿರಿಜೆಗೆ ಪರಮಾತ್ಮ ಹೇಳಿದ ವಾಕ್ಯವ ಕೇಳಿ ಅರಿಯಾ ಮನುಜ. ಸಾಕ್ಷಿ: ಗುಕಾರಂ ಮಮ ರೂಪಂಚ ರುಕಾರಂ ತವ ರೂಪಕಂ | ಉಭಯೋಃ ಸಂಗಮೋ ದೇವಃ ಗುರುರೂಪೇ ಮಹೇಶ್ವರಿ ||'' ಎಂದುದಾಗಿ, ಪಾಷಾಣದಮುಖದಲ್ಲಿ ಮರುಜೇವಣಿಗೆ ಉದಯವಾದಂತೆ, ನರಜನ್ಮಮುಖದಿ ಬಂದು ಎನ್ನ ಸರ್ವಜನ್ಮವ ಕಳೆದು ಪುನರ್ಜಾತನ ಮಾಡಿದ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆಂಬ ಗುರುವೆ ಎನ್ನ ಪ್ರಾಣ.