ಬರುತ ಬರುತ ಅರಣ್ಯದೊಳಗೊಂದು ಬಟ್ಟೆಯ ಕಂಡೆನು.
ಆ ಬಟ್ಟೆಯಗೊಂಡು ಬರುತಲೊಂದು ಸಾಗರವ ಕಂಡೆನು.
ಸಾಗರದ ನಡುವೊಂದೂರ ಕಂಡೆನು.
ಊರಮುಂದೊಂದು ಭವಹರವೆಂಬ ವೃಕ್ಷವ ಕಂಡೆನು.
ಆ ವೃಕ್ಷವನಾರಾಧಿಸಿದರೆ ಪರಮಾರ್ಥವೆಂಬ ಹಣ್ಣ
ಕರದೊಳಗೆ ಧರಿಸಿತ್ತು ನೋಡಾ.
ಕರದ ಹಣ್ಣು ಉರವ ತಾಗಿ, ಉರದ ಹಣ್ಣು ಶಿರವ ತಾಗಿ,
ಶಿರದ ಹಣ್ಣು ಮನವ ತಾಗಿ, ಮನದ ಹಣ್ಣು ಭಾವವ ತಾಗಿ,
ಭಾವದ ಹಣ್ಣು ಸರ್ವಕರಣಂಗಳನೆಲ್ಲವ ತಾಗಿ,
ಸರ್ವಾಂಗದೊಳು ಪರಿಪೂರ್ಣವಾದುದಿದೇನು ಚೋದ್ಯ ಹೇಳಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ!
Art
Manuscript
Music
Courtesy:
Transliteration
Baruta baruta araṇyadoḷagondu baṭṭeya kaṇḍenu.
Ā baṭṭeyagoṇḍu barutalondu sāgarava kaṇḍenu.
Sāgarada naḍuvondūra kaṇḍenu.
Ūramundondu bhavaharavemba vr̥kṣava kaṇḍenu.
Ā vr̥kṣavanārādhisidare paramārthavemba haṇṇa
karadoḷage dharisittu nōḍā.
Karada haṇṇu urava tāgi, urada haṇṇu śirava tāgi,
śirada haṇṇu manava tāgi, manada haṇṇu bhāvava tāgi,
bhāvada haṇṇu sarvakaraṇaṅgaḷanellava tāgi,
sarvāṅgadoḷu paripūrṇavādudidēnu cōdya hēḷā
paramaguru paḍuviḍi sid'dhamallināthaprabhuve!