ತನುವಿನ ಗುಣವ ವಿವರಿಸಿಹೆನೆಂದೆಡೆ,
ಮನ ಶುದ್ಧವಾಗಬೇಕು.
ಮನದ ಗುಣವ ವಿವರಿಸಿಹೆನೆಂದೆಡೆ,
ಇಂದ್ರಿಯಂಗಳು, ಶುದ್ಧವಾಗಬೇಕು.
ತನು ಮನ ಇಂದ್ರಿಯಂಗಳು ಶುದ್ಧ ಸುಯಿಧಾನವಾಗಿ,
ಲಿಂಗಮುಖಕ್ಕೆ ವೇದ್ಯವಾದಲ್ಲದೆ
ಗುಹೇಶ್ವರನ ಬೆರಸಬಾರದು ಕೇಳಾ ತಾಯೆ.
Transliteration Tanuvina guṇava vivarisihenendeḍe,
mana śud'dhavāgabēku.
Manada guṇava vivarisihenendeḍe,
indriyaṅgaḷu, śud'dhavāgabēku.
Tanu mana indriyaṅgaḷu śud'dha suyidhānavāgi,
liṅgamukhakke vēdyavādallade
guhēśvarana berasabāradu kēḷā tāye.
Hindi Translation तनु के गुण वर्णनकर कहे तो, मनशुद्ध होना चाहिए,
मन के गुण वर्णनकर कहे तो, इंद्रिय शुद्ध होनी चाहिए।
तन-मन-इंद्रिय शुद्ध सुयिधान बने
लिंगमुख को वेद्य हुए बिना
गुहेश्वर से मत मिलाना सुन माता।
Translated by: Eswara Sharma M and Govindarao B N