Index   ವಚನ - 40    Search  
 
ಪತಿವ್ರತ ಧರ್ಮ ಪಾಶಾಣವ ಪೂಜಿಸಲಾಪುದೆ? ಯತಿ-ಮುನಿ ಸನ್ಯಾಸಿಗಳು ಯಾತ್ರೆಯನು ಚರಿಸುವರು ಸತ್ಪಾತ್ರವಂ ಕಾಣದೆ. ಪತಿಯ ಪ್ರಾಣ, ಸತಿಯೆ ಅಂಗ, ಮಥನವಂ ಮಾಳ್ಪುದು ಪಾಶಕ್ಕೆ ಸಿಕ್ಕದೆ? ಘೃತವಾಯಿತು ರಕ್ತದಿಂದ, ರಕ್ತವಾಯಿತು ಘೃತದಿಂದ ಅಮೃತ ಪಂಚವರ್ಣ ಅಸೀಮದ ಮೂಲವ ಕಾಣದೆ ಮುಕ್ತಿಗೆಟ್ಟಿತು ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.