Index   ವಚನ - 41    Search  
 
ಇಟ್ಟಿಟ್ಟ ಕಲ್ಲಿಗೆ ಹರಿದಾಡುವರು ನೆಟ್ಟನೆ ಜ್ಞಾನಿಗಳಾದರೇನಯ್ಯ? ಪಟ್ಟಾಭಿಷೇಕವುಳ್ಳ ರಾಜನಬಿಟ್ಟು ರಾಜ್ಯಭ್ರಷ್ಟರಾಪರೆ? ಹುಟ್ಟು ಹೊಂದುವೆ ಬ್ರಹ್ಮನ ಕಾಣದೆ ತಮ್ಮ ತಮ್ಮ ಇಚ್ಛೆಗೆ ಹರಿವರು. ಭ್ರಷ್ಟತ್ವವಾಗಿ ಹೊಗಳುತಿವೆ ವೇದವಾಕ್ಯ. ಆತ್ಮನೆಂಬ ರಟ್ಟಮತಕೆ ಪರಿಪ್ರತಿಯಿಲ್ಲ ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.