Index   ವಚನ - 45    Search  
 
ಸಂದುಸಂಶಯವನಳಿದಲ್ಲದೆ ಮುಂದುದೋರದು ಭಕ್ತಿಸ್ಥಲ. ಗಂಧ ಗರಗಸದಿಂದ ಕೊರದು ಅರದು ಸುಟ್ಟರೆ ಪರಿಮಳ ಮಾಣ್ಬುದೆ? ವೃಂದ ವನದಿ ವೃಕ್ಷ ಫಲವಾಪಕಾಲಕ್ಕೆ ಪಾಷಾಣದಲ್ಲಿಯಿಡುವೆಡೆ ನೊಂದೆನೆಂದು ನೋವ ತಾಳ್ದ ಮರನು ವರುಷಕೆ ಆಪುದೆ? ಅಂದು ಏನು, ಇಂದು ಏನು ಭಕ್ತಂಗೆ ಕುಂದು ನಿಂದೆ ಸ್ತುತಿ ಒಂದೆ ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.