Index   ವಚನ - 54    Search  
 
ಯಾವಕಾಲತಪ್ಪಿದರೆ ಸಾವಕಾಲ ತಪ್ಪದುಯೆಂಬರಯ್ಯ. ದೇವದ್ರೋಹಿಗಳು ಎಲ್ಲ ಬಲ್ಲರಯ್ಯ. ಕೇವಲ ಶರಣಸ್ಥಲಗಳ ಗಾವುದದೊಳು ನೆರಸೂರ ಮುಂದೆ ಕಾಣರು. ಗೋವಿನ ಕ್ಷೀರದ ಸ್ವಾದವ ಗೋಗಾಯಿಬಲ್ಲನೆ ಗೋಪ್ಯಾರ್ಥವ? ಈವ ಕಾಲ ತಪ್ಪಿದರೆ ಸಾವಕಾಲ ತಪ್ಪುವುದು ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.