Index   ವಚನ - 55    Search  
 
ತ್ರಿಗುಣಾತ್ಮ ತ್ರಿಸಂಧ್ಯಾಕಾಲದ ಪ್ರವರ್ತನೆಯಲ್ಲಿ ವೇದಿಸಿ, ತ್ರಿವಿಧ ಶುದ್ಧ ಸಿದ್ಧ ಪ್ರಸಿದ್ಧವ ಪ್ರಮಾಣಿಸಿ, ತ್ರಿಭುವನ ಏಕವಾದ ಲಿಂಗ ತಾ ತಲ್ಲಿಂಗ ಜಂಗಮ. ಸನ್ಮತ ಗುರು ತ್ರಿಶೂಲ, ಆಣವಮಲ ಮಾಯಾಮಲ ಕಾರ್ಮಿಕಮಲತ್ರಯವಂಬುಧಿ ತ್ರಿಪುಂಡ್ರ ತ್ರಿಣಾಮಲದಲಿ ಧರಿಸಿ, ತ್ರಿಯಕ್ಷರ ಪ್ರಮಾಣ ಉಚ್ಚರಿಸಿ, ಊರ್ಧ್ವದಲ್ಲಿ ನಿಲಿಸಿ ತ್ರಿವಿಧನ ಕಾಣಬಲ್ಲರೆ ತ್ರಿಭಾಗದೊಳು ಷಡ್ಭಾಗವಾಪುದು, ತ್ರಿಕಾಲಜ್ಞಾನಕ್ಕೆ ಕೆಂಡ ಜ್ಞಾನ ಕಾಣಯ್ಯ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.