Index   ವಚನ - 68    Search  
 
ಪುರಾಣವಂ ಕಲಿತು ಪುಂಡರ ಸಂಗವ ಮಾಡಿದಂತೆ ಪರೀಕ್ಷಿಸಿ ಪರರಲ್ಲಿ ತತ್ವಾರ್ಥವಂ ಕೊಚ್ಚಿ ದ್ರವ್ಯವಂ ತಂದು ಬಿರಿದಿಗೆ ಉದಾರತ್ವವಂ ಬೀರಲು ಸೆರೆಯಾಗಿ ಮಾಳ್ಪನೆ? ಎರವಿನ ವಚನವ ಕಲಿತನೆಂಬ ಹೆಮ್ಮೆಗೆ ಮುರುಕವ ಮಾಡುವ ಮೂರ್ಖರಿಗೆ ಮುಕ್ತಿಯಿಲ್ಲ ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.