Index   ವಚನ - 69    Search  
 
ಲಿಂಗದ ಬೆಳಗ ಅನಂಗದೊಳರಿಯದೆ ಅಂಗೀಕರಿಸುವರು. ಮತ್ತೆ ಆಗಮ ಶ್ರುತಿಯ ಭಂಗಿತರ ಮೂಲಂಗಿಯ ಮೇದಂತೆ ನುಂಗದೆ ಬೇಹುದೆ? ಲಿಂಗಾಂಗದ ಮೂಲವನರಿವುದು ಅನಂಗಿಗಹುದೆ? ಲಿಂಗಾಂಗಿಯ ನಡೆ ನುಡಿ ಚೈತನ್ಯ ಸರ್ವಾಂಗಲಿಂಗಮಯ. ಹಂಗಿನ ಕಟ್ಟೊಡೆದು ಕಾಬುದೆ ಕರುಣ ಕೃಪೆ ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.