Index   ವಚನ - 79    Search  
 
ಅನಂತ ಯುಗದಲ್ಲಿ ಆತ್ಮದೈವವಲ್ಲದೆ ಅನ್ಯಾರ್ಥ ದೈವವಿಲ್ಲ. ಅನಾದಿ ಆದಿ ಅಧ್ಯಾತ್ಮ ಧ್ಯಾನ ಜ್ಞಾನ ಮುಗ್ಧವ್ರತ ಮಾರ್ಗಗತಿ [ಲಿಂ]ಗಸ್ಥಲ ಅನುರ್ದ ವಿದ್ಯ ಅವಿದ್ಯ ಕುಲ ಕಾಯಕ ಆಯುಷ್ಯ ಅಲ್ಪಾಯುಷ್ಯ ಮನೆ ದೈವವಂ [ಬಿಟ್ಟು] ಅನರ್ಥಕೆ ಎರಗುವುದು ಆವ ಸ್ವಯ? ಮನೋರಾಜ ಪ್ರಾಣಲಿಂಗ ಪ್ರತಿಷ್ಠದಿ ದ[ರುಶ]ನವುಂಟು ತನು ತರ್ಕಿ ಅಂಗವಿಕಾರಿಗೆಯೆಲ್ಲಿಯ ಭಕ್ತಿಯೆನಲಿಲ್ಲ ಎನಿಸಿಕೊಂಡವರಿಲ್ಲ , ಅನೃತ ಮೊದಲಿಲ್ಲ ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.