Index   ವಚನ - 88    Search  
 
ಅಂತು ಇಪ್ಪ ಶರಣರ ಅಂತಸ್ತವ ಎಂತು ಪೊಗಳುವೆನಯ್ಯ? ಮಂತ್ರಕೆ ಮೊದಲಿಗರು, ಉಪದೇಶಕೆ ಉಪಮಾತೀತರು. ಅಂತಸ್ಥ ಆತ್ಮದಲ್ಲಿ ಸರ್ವರಕ್ಷಕರು ತಂತ್ರವಾಹಕರು. ಸತ್ಯ ಶಿವಾರ್ಚಕರು ಚಿಂತೆ ನಿಶ್ಚಿಂತರು ಚಿದಾನಂದ ಶರಣರು. ಅವರು ನಿಂತುದೇ ತೀರ್ಥ, ನಿದ್ರೆಯೇ ವಾರಣಾಸಿ, ನಿರುತ ವಾಕ್ಯವೇ ಪರ್ವತ, ನಿಜವೇ ಕೈಲಾಸ. ಅಂತು ಅಂತರ್ಮಯರ ಎನಗೊಮ್ಮೆ ತೋರಿಸಯ್ಯ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.