Index   ವಚನ - 89    Search  
 
ನೋಡುವರೆ ಎನ್ನಳವೆ ನೋಟಕ್ಕೆ ಸಿಕ್ಕರು; ಕೂಡುವರೆ ಎನ್ನಳವೆ ಕೂಟಕ್ಕೆ ಬಾರರು; ಬೇಡುವರೆ ಎನ್ನಳವೆ ಬೇಡಿದ್ದ ಕೊಡರು. ಓಡಿ ಓಡಿ ಗತಬಿದ್ದೆ ಒಬ್ಬರನು ಕಾಣೆ. ಬೇಡ ಬೇಂಟೆಗೆ ಹೋಗಿ ಬರಿಗೈಯಲಿ ಬಂದಂತೆ ನಾಡ ತಿರುಗಲಾರೆ ನನ್ನಿಂದ ಆಪುದೇನು? ನೋಡಿಕೋ ಇನ್ನು ನನ್ನಿಂದ ಆಗದು ನಿನ್ನಿಂದ ಆದುದು ಬೋಡಿಯಲಿ ಲಕ್ಷಣವ ಅರೆಸುವರೆ? ಕೂಡಗೊಡು ನಿನ್ನ ಮಹಾತ್ಮೆ ಆಡಿದ ಮಾತಿಗೆ ತಪ್ಪಲಿಲ್ಲ ಏಕವಾಕ್ಯ ಪತಿಷ್ಠಚಾರಿ ಕಾಡುವರೆ ನೀನು ನಿಃಕರುಣಿಯಲ್ಲ ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.