Index   ವಚನ - 94    Search  
 
ತನ್ನ ಸತಿ ತನ್ನ ಕಾಯಕ ಕೃಷಿಯಲ್ಲದೆ ಅನ್ಯಾರ್ಥವ ನೋಡಿ ಗ್ರಹಿಸದಾತನ ನೋಟವೆ ನೋಟ. ಇನ್ನು ಶಿವಸ್ತುತಿಯಲ್ಲದೆ ನರಸ್ತುತಿಯ ಕೇಳ್ದುದೆ ಕರ್ಣ. ಉನ್ನತದುರ್ಗಂಧ ಹೊಂದದೆ ಸುಗಂಧ ತೃಪ್ತಿ ವಡವುದೇ ನಾಸಿಕ. ತನ್ನ ತಾನು ಅರಿತು ಒಬ್ಬರ ಬೇಡದೆ ನಿಂದ್ಯವ ಬಿಟ್ಟದ್ದೆ ಜಿಹ್ವೆ. ಮುನ್ನ ತಾ ಈ ನಾಲ್ಕು ಮುಕ್ತಿ ಬೇಕಾದವರು ಇಂತಪ್ಪುದ ಮನ್ನಿಸೂದು. ಈ ನಾಲ್ಕು ಶುದ್ಧಯಿಲ್ಲದವರ ಅನ್ಯಾಯಿಗಳನೊಪ್ಪುವರೆ ನಮ್ಮ ಸಂಗಯ್ಯನ ಶರಣರು? ಇನ್ನು ಅನ್ಯಾಯಿಗಳಿಗೆ ಪ್ರಳಯ ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.