Index   ವಚನ - 97    Search  
 
ಒಬ್ಬರಿಗೆ ಹೇಳಿ ನಡೆಯದವರ ಸಂಗ ಗೊಬ್ಬರದೊಳಗಣ ಚೇಳಿನಂತೆ. ಹುಬ್ಬ ಹಾಕತಿಪ್ಪ ಹುಸಿಕರ ಕಂಡರೆ ಹುಸಿ, ದಿಟರ ಕಂಡರೆ ದಿಟ, ಹಬ್ಬಿಸುವ ಮಾತಿನ ಮಾಲೆಯ ಮರ್ಕಟನಂತೆ ಇಬ್ಬಂದಿಗತನ ಇಹದಲ್ಲಿ ನಿಂತವಂಗೆ ಇಹಪರವಿಲ್ಲ. ಉಬ್ಬಿಸುವ ಉರಿಗಿಚ್ಚಿನಂತೆ ಉರಿಗಂಟಿಕೆ ಹಬ್ಬವ ಮಾಡಿದವರ ಮನೆಗೆ ಹಾಡ ಬಂದಂತೆ. ಸರ್ಪಗ್ರಹಣ ಹಿಡಿವುತಿದೆ ಇಂತು ಎಚ್ಚಕರಿಗೆ ಅರ್ಬುತನನೆಬ್ಬಿಸಲಿಕೆ ಆಗಮದ ದವಡೆಯ ಬಂದ ತುಬ್ಬನಿಕ್ಕಿ ಇಂಥಾ ವೇಷವ ತುದಿ ಮೂಗ ಕೊಯ್ಯುವನು ಇನ್ನು ಒಬ್ಬನ ಬೋಧೆಯಲ್ಲದೆ ಇಲ್ಲ ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.