ವಚನ - 1231     
 
ತಾ ಕೇಳಿ, ನೋಡಿ, ಮುಟ್ಟಿ ಮನವರಿದ ಸುಖವ ಲಿಂಗಕ್ಕೆ ಕೊಡುವುದೆಂತೊ? ಅಂಗ ಮನವೆಂಬವನು ಲಿಂಗದ ಪರಿಪೂರ್ಣವನು ಕಾಣದಿಹ ಅಂಗಹೀನರಿಗೇಕೆ ವ್ರತಾಚಾರದ ಹೊಲಬು? ಜೀರ್ಣಪರ್ಣ-ರವಿರಶ್ಮಿ ನ್ಯಾಯದಂತೆ ಜಗದೊಳಗೆ ಏತರಲ್ಲಿಯೂ ಖಂಡಿತವಿಲ್ಲದೆ ಗುಹೇಶ್ವರನಿಪ್ಪ ಭಕ್ತದೇಹಿಕನಾಗಿ!