ಪೃಥ್ವಿಯೇ ಅಂಗವಾದ ಭಕ್ತನು
ಎಲ್ಲಕ್ಕೂ ತಾನೇ ಆಶ್ರಯವಾಗಿಹನು.
ತನ್ನಂಗ ಪ್ರಾಣ ಜ್ಞಾನ ಕಳೆವರರಾದ
ಗುರುಲಿಂಗಜಂಗಮಕ್ಕೆ ತಾನಲ್ಲದೆ,
ಇತರೇತರವಾದ ಬಹುಜನಾದಿಗಳಿಗೆ
ನಡೆ ನುಡಿ ನೋಟಕ್ಕಗಣಿತ ಅಗಮ್ಯವಾಗಿರಿಸಿಹನು.
ಗುರುನಿರಂಜನ ಚನ್ನಬಸವಲಿಂಗವನರಿವುದಕ್ಕೆ ಆದಿ ತಾನೆ.
Art
Manuscript
Music
Courtesy:
Transliteration
Pr̥thviyē aṅgavāda bhaktanu
ellakkū tānē āśrayavāgihanu.
Tannaṅga prāṇa jñāna kaḷevararāda
guruliṅgajaṅgamakke tānallade,
itarētaravāda bahujanādigaḷige
naḍe nuḍi nōṭakkagaṇita agamyavāgirisihanu.
Guruniran̄jana cannabasavaliṅgavanarivudakke ādi tāne.