ಪರಧನ ಪರಸ್ತ್ರೀ ಪರನಿಂದೆ ಪರದೈವ ಅನೃತಾದಿ
ಪಂಚಮಹಾಪಾತಕವ ಪರಿಹರಿಸದನ್ನಕ್ಕರ
ವೀರಮಾಹೇಶ್ವರನೆಂತಪ್ಪನಯ್ಯಾ?
ಸಂಚಿತಾದಿ ಕರ್ಮತ್ರಯದೊಳಿರ್ದು ಕೆಂಚ,
ಧವಲಕ್ಕಜಲವರ್ತಕವಳಿಯದೆ
ವೀರಮಾಹೇಶ್ವರನಾದೆನೆಂದರೆ ಅಸಾಧ್ಯ ಕಾಣಾ
ಗುರುನಿರಂಜನ ಚನ್ನಬಸವಲಿಂಗ ನಿಮ್ಮಲ್ಲಿ.
Art
Manuscript
Music
Courtesy:
Transliteration
Paradhana parastrī paraninde paradaiva anr̥tādi
pan̄camahāpātakava pariharisadannakkara
vīramāhēśvaranentappanayyā?
San̄citādi karmatrayadoḷirdu ken̄ca,
dhavalakkajalavartakavaḷiyade
vīramāhēśvaranādenendare asādhya kāṇā
guruniran̄jana cannabasavaliṅga nim'malli.
ಸ್ಥಲ -
ಮಾಹೇಶ್ವರನ ಭಕ್ತಸ್ಥಲ