Index   ವಚನ - 306    Search  
 
ಅರಿದ ಶರಣ ಮರೆದು ಮಾಡುವನಲ್ಲ, ಮಾಟದ ಕಳೆ ಅಳಿದಿರ್ದುದಾಗಿ. ಹಿಡಿದ ಶರಣ ಹರಿದು ನೋಡುವನಲ್ಲ, ನೋಟದ ಜ್ವಾಲೆ ದೂಟಿಸಿರ್ದುದಾಗಿ. ಮಾಟ ನೋಟ ಕೂಟವ ಒಳಹೊರಗಾಡುವ ಗುರುನಿರಂಜನ ಚನ್ನಬಸವಲಿಂಗಕ್ಕೆ ಸತಿಯೆಂದು.