Index   ವಚನ - 307    Search  
 
ಹಿರಿದು ಲಿಂಗವ ಮರೆದ ಕೈಯಲ್ಲಿ ಹಿಡಿದು ಪರಿಪರಿಯಿಂದಾಡುವ ಮಡದಿ ಇವಳಾರಯ್ಯ! ಸಿರಿವುಳ್ಳ ಹಿರಿಯರ ಭಿನ್ನಭಾವದಲ್ಲಿ ಹರಿದು ಹರಿದು ನೆರೆವ ಉರವಣಿಯವಳು ಇವಳಾರಯ್ಯಾ! ತುಂಬಿದ ಪುರದೊಳಗೆ ಸಂಭ್ರಮಸುಖಿ ಗುರುನಿರಂಜನ ಚನ್ನಬಸವಲಿಂಗಕ್ಕೊಂದಿಟ್ಟು ತಾನೊಂದಾಡುವ ಸಗುಣಶೌರಿ.