ಶರಣಸತಿ ಲಿಂಗಪತಿಯೆಂಬ ಕುಶಲಗತಿಯುನ್ನತವನರಿಯದೆ
ಅರ್ಚನೆಯಾರ್ಪಣಕ್ಕೆ ಭಿನ್ನರೆಂದು ನುಡಿವ
ಅದ್ವೈತ ಗೊಡ್ಡು ವೇದಾಂತಿಗಳ ಕಸಮನವ ನೋಡಾ!
ನಿಜಭಕ್ತಿ ಸುಜ್ಞಾನ ಪರಮವೈರಾಗ್ಯವೇ
ಅಂಗ ಮನ ಭಾವವಾಗಿರ್ದಡೆ
ಅದ್ವೈತಿಗಳಿರವೆಂದು ನುಡಿವ ಅಪಶೈವ ಸಿದ್ಧಾಂತಿಗಳ
ದುರ್ಭಾವದಂಗವ ನೋಡಾ!
ಈ ಜೀವಕಾಯರಂತಂತಿರಲಿ,
ಸಕಲನಿಃಕಲಸನುಮತ
ಗುರುನಿರಂಜನ ಚನ್ನಬಸವಲಿಂಗಾ,
ನಿಮ್ಮ ಪ್ರಸಾದಿ ಶರಣ.
Art
Manuscript
Music
Courtesy:
Transliteration
Śaraṇasati liṅgapatiyemba kuśalagatiyunnatavanariyade
arcaneyārpaṇakke bhinnarendu nuḍiva
advaita goḍḍu vēdāntigaḷa kasamanava nōḍā!
Nijabhakti sujñāna paramavairāgyavē
aṅga mana bhāvavāgirdaḍe
advaitigaḷiravendu nuḍiva apaśaiva sid'dhāntigaḷa
durbhāvadaṅgava nōḍā!
Ī jīvakāyarantantirali,
sakalaniḥkalasanumata
guruniran̄jana cannabasavaliṅgā,
nim'ma prasādi śaraṇa.