ಅಂತರಂಗದಲ್ಲಿ ಅರಿಯದಿರ್ದ ಪರಮಮಹಾಲಿಂಗವು
ಗುರುಮುಖದಿಂದೆ ಕರ ಮನ
ಭಾವದಲ್ಲಿ ಥಳಥಳಿಸಿ ಬೆಳಗುತ್ತಿರಲು,
ಅಲ್ಲಿಯೇ ಮುಕ್ತಿಯ ಪಡೆದಾನಂದಿಸಲರಿಯದೆ,
ಕಾಶಿ ಗೋಕರ್ಣ ರಾಮೇಶ ನದಿ
ಕಡಲತೀರವೆಂಬ ಪುಣ್ಯಕ್ಷೇತ್ರಂಗಳೆಂದು
ಕಾಗೆ ಶಿಖರವನೇರಿ ಕರ್ರೆಂದು ಹೋದಂತೆ
ಕಂಡರೇನು ಕಾಣಿಸಿಕೊಂಡರೇನು
ಹೋಗಿ ಬರುವ ಮಾರ್ಗ ತಪ್ಪದು
ಗುರುನಿರಂಜನ ಚನ್ನಬಸವಲಿಂಗ ಸಾಕ್ಷಿಯಾಗಿ.
Art
Manuscript
Music
Courtesy:
Transliteration
Antaraṅgadalli ariyadirda paramamahāliṅgavu
gurumukhadinde kara mana
bhāvadalli thaḷathaḷisi beḷaguttiralu,
alliyē muktiya paḍedānandisalariyade,
kāśi gōkarṇa rāmēśa nadi
kaḍalatīravemba puṇyakṣētraṅgaḷendu
kāge śikharavanēri karrendu hōdante
kaṇḍarēnu kāṇisikoṇḍarēnu
hōgi baruva mārga tappadu
guruniran̄jana cannabasavaliṅga sākṣiyāgi.