•  
  •  
  •  
  •  
Index   ವಚನ - 128    Search  
 
ಜೀವವಿಲ್ಲದ ಹೆಣನ ಹಿಡಿದಾಡುವರಯ್ಯಾ. ಪ್ರತಿಯಿಲ್ಲದಪ್ರತಿಗೆ ಪ್ರತಿಯ ಮಾಡುವರಯ್ಯಾ. ಶಿರವಿಲ್ಲದ ಮುಂಡಕ್ಕೆ ಸೇಸೆಯನಿಕ್ಕುವರಯ್ಯಾ, ಗುಹೇಶ್ವರಾ.
Transliteration Jīvavillada heṇana hiḍidāḍuvarayyā. Pratiyilladapratige pratiya māḍuvarayyā. Śiravillada muṇḍakke sēseyanikkuvarayyā, guhēśvarā.
Hindi Translation निर्जीव लाश पकडकर खेलते हैं। तुलाना न करनेवाली प्रति पर प्रीतिकरते हैं। बिना शरीरवाले मुंड को श्रृंगार करते हैं गुहेश्वरा। Translated by: Eswara Sharma M and Govindarao B N
Tamil Translation உயிரற்ற பிணத்தைக் கொண்டாடுவரையனே, பிரதியற்ற பிரதியை பிரதிமையாக்குவரையனே, தலையற்ற முண்டத்திற்கு ஒப்பனை செய்வரையனே குஹேசுவரனே. Translated by: Smt. Kalyani Venkataraman, Chennai
ಶಬ್ದಾರ್ಥಗಳು ಜೀವವಿಲ್ಲದ ಹೆಣ = ಜಡವಾದ ವೈಷಯಿಕ ಪ್ರಪಂಚ; ಪ್ರತಿಮಾಡು = ಪ್ರತಿಮೆಗೊಳಿಸು; ಸಾಕಾರಗೊಳಿಸು; ಪ್ರತಿಯಿಲ್ಲದ ಪ್ರತಿ = ಹೋಲಿಕೆಗೆ ನಿಲುಕದ ವಸ್ತು ನಿರಾಕಾರ ದೇವ; ಶಿರವಿಲ್ಲದ ಮುಂಡ = ಮಾಯಿಕ ದೇಹ, ಜಡಭೌತ ತನು; ಸೇಸೆಯನಿಕ್ಕು = ಸಿಂಗರಿಸು; ಹಿಡಿದಾಡು = ಅನುಭವಿಸಿ ಅಮೋದಿಸುವುದು; Written by: Sri Siddeswara Swamiji, Vijayapura