ಆದ್ಯರಲ್ಲ ವೇದ್ಯರಲ್ಲ ಸಾಧ್ಯರಲ್ಲದ ಹಿರಿಯರ ನೋಡಾ.
ತನುವಿಕಾರ ಮನವಿಕಾರ ಇಂದ್ರಿಯವಿಕಾರದ ಹಿರಿಯರ ನೋಡಾ.
ಶಿವಚಿಂತೆ ಶಿವಜ್ಞಾನಿಗಳ ಕಂಡಡೆ, ಆಳವಾಡಿ ನುಡಿವರು,
ಗುಹೇಶ್ವರನರಿಯದ ಕರ್ಮಿಗಳು.
Transliteration Ādyaralla vēdyaralla sādhyarallada hiriyara nōḍā.
Tanuvikāra manavikāra indriyavikārada hiriyara nōḍā.
Śivacinte śivajñānigaḷa kaṇḍaḍe, āḷavāḍi nuḍivaru,
guhēśvaranariyada karmigaḷu.
Hindi Translation बुजुर्ग नहीं, ज्ञानि नहीं, बिना साधना के बडों को देखो।
तनुविकार, मनविकार, इंद्रियविकार के बडों को देखो।
शिव चिंतक शिवज्ञानी को देखे तो निंदा नहीं करते हैं
गुहेश्वर को न जाननेवाले कर्मी लोग।
Translated by: Eswara Sharma M and Govindarao B N
Tamil Translation முன்னோரன்று உணர்ந்தவரன்று சாதனை செய்யாத
பெரியோரைக் காண்மின்.
உடல் விகாரம், மனவிகாரம், புலன் விகாரமுள்ள
பெரியோரைக் காண்மின்.
சிவனையே எண்ணும் சிவஞானிகளைக் காணின் இகழும்
குஹேசுவரனை அறியாத கருமிகள்.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಆದ್ಯರು = ಪುರಾತನರು, ಶಿವನ ಅರಿವಿನೊಂದಿಗೆ ಜಾತರಾದವರು; ಆಳವಾಡಿ ನುಡಿ = ನಿಂದಿಸು; ಕರ್ಮಿ = ಕರ್ಮಶೀಲ, ಕರ್ಮಬಂಧಿತ; ವೇದ್ಯರು = ಶ್ರವಣ-ಮನನ-ನಿದಿಧ್ಯಾಸಗಳ ಮೂಲಕ ಪರಬ್ರಹ್ಮವನು ಅರಿತವರು; ಶಿವಚಿಂತೆ = ಶಿವಸ್ಮರಣೆ; ಶಿವಜ್ಞಾನ = ಸ್ವಾನುಭವ; ಸಾಧ್ಯರು = ಸಾಧನೆಯ ಮೂಲಕ ಸಿದ್ದಯನು ಪಡೆದವರು; ಹಿರಿಯರು = ಸ್ವಯಂ ಧೀರರೂ ಪಂಡಿತರೂ ಶ್ರೇಷ್ಠರೂ ಎಂದು ಅಭಿಮಾನಿಸುವವರು;
Written by: Sri Siddeswara Swamiji, Vijayapura