Index   ವಚನ - 653    Search  
 
ಬೇಕೆನ್ನದ ಬೇಡೆನ್ನದ ಬಾ ಹೋಗೆಂಬ ಆಗು ಹೋಗಿನ ಸೋಗಿನ ಸೊಮ್ಮಿನವನಲ್ಲ ಕಾಣಾ ನಿಮ್ಮ ಶರಣ. ಮಾತಿನ ಮಲಕಿನ ನೀತಿಗೆ ಸೋತು ಅರಿದವನಲ್ಲ ನಿಮ್ಮ ಶರಣ. ಕಾಯದಂಡನೆ ಬಾಯಮುದ್ರೆ ಭಿನ್ನಭಾವಿಯೆಂಬ ಮಾಯೆಯ ಭ್ರಮೆಗೆ ಮನವಿಟ್ಟವನಲ್ಲ ನಿಮ್ಮ ಶರಣ. ಗುರುನಿರಂಜನ ಚನ್ನಬಸವಲಿಂಗಾ, ನಿಮ್ಮ ಶರಣನ ಪರಿ ಅವ ಲೋಕದೊಳಗೂ ಇಲ್ಲ ಕಾಣಾ.