ತೂರ್ಯಾನಂದಮಯ ಶರಣನು ತಾನೇ
ಬ್ರಹ್ಮವೆಂದು ನುಡಿದುಕೊಂಡು
ಸತ್ಕ್ರಿಯಾನುಭಾವರತಿಯನರಿಯದೆ,
ಭಾವದತ್ತ ಹೋಗುವ ಗೊಡ್ಡು ವೇದಾಂತಿಯಂತಲ್ಲ.
ಅದೇನು ಕಾರಣವೆಂದೊಡೆ,
ತನ್ನ ಕಾಯವೇ ಇಷ್ಟಲಿಂಗಸ್ವರೂಪವಾದ ಕಾರಣ.
ತಾನು ದೇಹಿಯಾಗಿ ಲಿಂಗವೇ ನಿರ್ದೇಹಿಯಾಗಿ
ತಾನು ಮಲಮಾಯಾ ಪಾಶಬದ್ಧನಾಗಿ ಲಿಂಗವೇ ನಿರ್ಮಲ
ನಿರ್ಮಾಯ ಪಾಶವಿರಹಿತನೆಂದು
ಸಮ್ಯಕ್ಜ್ಞಾನಾನುಭಾವದನುವರಿಯದೆ ಸೂತಕಿಯಾಗಿ,
ಭಿನ್ನವಿಟ್ಟರ್ಚಿಸಿ ಫಲಪದವಡೆದು ಭೋಗಿಸಿ
ಎಡೆಯಾಡುವ ಶೈವಸಿದ್ಧಾಂತಿಯಂತಲ್ಲ.
ಅದೇನು ಕಾರಣವೆಂದೊಡೆ, ಚಿತ್ಪ್ರಣವಲಿಂಗ ತಾನಾದ ಕಾರಣ.
ಭಿನ್ನಾಭಿನ್ನವಳಿದು ಗುರುನಿರಂಜನ ಚನ್ನಬಸವಲಿಂಗದಲ್ಲಿ
ಪರಮಸುಖಪರಿಣಾಮಿಯಾಗಿರ್ದೆನು.
Art
Manuscript
Music
Courtesy:
Transliteration
Tūryānandamaya śaraṇanu tānē
brahmavendu nuḍidukoṇḍu
satkriyānubhāvaratiyanariyade,
bhāvadatta hōguva goḍḍu vēdāntiyantalla.
Adēnu kāraṇavendoḍe,
tanna kāyavē iṣṭaliṅgasvarūpavāda kāraṇa.
Tānu dēhiyāgi liṅgavē nirdēhiyāgi
tānu malamāyā pāśabad'dhanāgi liṅgavē nirmala
Nirmāya pāśavirahitanendu
samyakjñānānubhāvadanuvariyade sūtakiyāgi,
bhinnaviṭṭarcisi phalapadavaḍedu bhōgisi
eḍeyāḍuva śaivasid'dhāntiyantalla.
Adēnu kāraṇavendoḍe, citpraṇavaliṅga tānāda kāraṇa.
Bhinnābhinnavaḷidu guruniran̄jana cannabasavaliṅgadalli
paramasukhapariṇāmiyāgirdenu.