ತಾನೇ ಶಿವನೆಂದು ಅರಿದು ಸತ್ತ ಬಳಿಕ
ನಿತ್ಯಾನಂದ ನಿಜಸುಖಿಯೆಂದಿತ್ತು.
ತಾನೇ ದೇಹಿಯೆಂದು ಮರೆದು ಸತ್ತ ಬಳಿಕ
ಮಿಥ್ಯಾನಂದ ಭವದುಃಖಿಯೆಂದಿತ್ತು.
ತನ್ನ ತಾನರಿಯದೆ ತಾನೆಯೆಂದು
ತನು ಭಾವ-ಮನ-ಪ್ರಾಣಧರ್ಮದಲ್ಲಿರ್ದು
ಸತ್ತ ಬಳಿಕ ತ್ರಿದೈವ ಕುಳವೆಂದಿತ್ತು.
ತನುಭಾವನಾಗಿ ಮಹಾನುಭಾವ
ಶಿವನ ಘನವಾಗಿ ಪೂಜಿಸಿ ತನುವಳಿದ ಬಳಿಕ
ದೇವಾದಿ ಮನುಜಾಂತ್ಯ ಪದದೊಳೊಂದುಂಟು ಮೂಲಕ್ಕೆಂದಿತ್ತು
ಗುರುನಿರಂಜನ ಚನ್ನಬಸವಲಿಂಗದಲ್ಲಿ
ಶಿವಶರಣರ ವಾಕ್ಯ.