Index   ವಚನ - 763    Search  
 
ಅಯ್ಯಾ, ಎನ್ನ ಕೈ ಕೈಗೆ ಬಂದಮೇಲೆ ಕ್ರಿಯಾಂಗನೆಯಾದೆ, ಜ್ಞಾನಾಂಗನೆಯಾದೆ, ಇಚ್ಫಾಂಗನೆಯಾದೆ, ಆದಿಯಂಗನೆಯಾದೆ. ಚಿದಂಗನೆಯ ಶರಗವಿಡಿದು ಪರಾಂಗನೆಯಾಗಿ ಪ್ರಸಾದಮೂರ್ತಿಯ ಅನುಭಾವಕ್ಕಂಗವಾಗಿ ಅಗಲದಿರ್ದೆನು ಗುರುನಿರಂಜನ ಚನ್ನಬಸವಲಿಂಗದಲ್ಲಿ.