Index   ವಚನ - 774    Search  
 
ಪ್ರಕಾಶಪ್ರವರ್ತನ ಮೋಹನವೆಂಬ ಸದ್ಭಾವತ್ರಯದಲ್ಲಿ ಮುಳುಗಿ ಭಾವಲಿಂಗಸನ್ನಿಹಿತ ಶರಣಂಗೆ ದುರ್ಭಾವತ್ರಯಂಗಳು ಹೊದ್ದಲಮ್ಮವು ನೋಡಾ. ವಿದ್ಯಾತ್ರಯದಲ್ಲಿ ಶುದ್ಧಗತಿಮತಿ ಗೂಢಗಂಭೀರ ಗುರುನಿರಂಜನ ಚನ್ನಬಸವಲಿಂಗ ತಾನಾದ ಶರಣಂಗೆ ನೀನೆಂಬ ಕುರುಹು ನಿಶ್ಶೂನ್ಯ ಕಾಣಾ.