ವಚನ - 1318     
 
ನೋಟದ ಸುಖ ಉಳ್ಳನ್ನಬರ ಬೆರಸಲೆಲ್ಲಿಯದೊ? ಬೆರಸುವ ಭರ ಉಳ್ಳನ್ನಬರ ತವಕ ಹಿಂಗದು. ನಿಮ್ಮ ನೋಡಿ ಕೂಡಿ ಸೈವರಗಾದ ಸುಖವ, ಏನೆಂದುಪಮಿಸುವೆ ಗುಹೇಶ್ವರಾ?