Index   ವಚನ - 1319    Search  
 
ನೋಟವೆ ಕೂಟ, ಕೂಟವೆ ಪ್ರಾಣ, ಪ್ರಾಣವೆ ಏಕ, ಏಕವೆ ಸಮರಸ, ಸಮರಸವೆ ಲಿಂಗ, ಲಿಂಗವೆ ಪರಿಪೂರ್ಣ, ಪರಿಪೂರ್ಣವೆ ಪರಬ್ರಹ್ಮ, ಪರಬ್ರಹ್ಮವೆ ತಾನು! ಇಂತೀ ನಿಜವ ಗುಹೇಶ್ವರ ಬಲ್ಲನಲ್ಲದೆ ಕಣ್ಣುಗೆಟ್ಟಣ್ಣಗಳು ಎತ್ತ ಬಲ್ಲರು ನೋಡಯ್ಯಾ.