•  
  •  
  •  
  •  
Index   ವಚನ - 1328    Search  
 
ಪರಮಜ್ಞಾನವೆಂಬ ಸಸಿಗೆ, ಗುರುಭಕ್ತಿ ಎಂಬ ಭೂಮಿಯ ಮಣ್ಣ ತಂದು ಪಾತೆಯ ಕಟ್ಟಿದೆ. ಲಿಂಗಭಕ್ತಿ ಎಂಬ ಗೊಬ್ಬರವ ತುಂಬಿದೆ. ಜಂಗಮಭಕ್ತಿ ಎಂಬ ಪರಮಾನಂದದ ಜಲವ ನೀಡಿದೆ. ಇಂತಿವರಿಂದ, ಭಕ್ತಿವೃಕ್ಷ ಫಲವ ಧರಿಸೆ ಗುಹೇಶ್ವರಲಿಂಗದಲ್ಲಿ ಮುಕ್ತನಾದೆನು ಕಾಣಾ ಸಂಗನಬಸವಣ್ಣಾ.
Transliteration Paramajñānavemba sasige, gurubhakti emba bhūmiya maṇṇa tandu pāteya kaṭṭide. Liṅgabhakti emba gobbarava tumbide. Jaṅgamabhakti emba paramānandada jalava nīḍide. Intivarinda, bhaktivr̥kṣa phalava dharise guhēśvaraliṅgadalli muktanādenu kāṇā saṅganabasavaṇṇā.
Hindi Translation परम ज्ञान जैसे सस्य को, गुरुभक्ति जैसी भूमि की मिट्टी लाकर आलबाल बनाये। लिंगभक्ति जैसे गोबर भरे जंगमभक्ति कहें परमानंद जल दिये। ऐसों से भक्तिवृक्ष फल भरे तो गुहेश्वर लिंग में मुक्त बना देख संगनबसवण्णा। Translated by: Eswara Sharma M and Govindarao B N