ಅಂಗನೆಯ ಸಂಗಮೋಹಿಗೆ ಗುರುನಿಷ್ಠೆಯಿಲ್ಲ, ಲಿಂಗನಿಷ್ಠೆಯಿಲ್ಲ,
ಜಂಗಮನಿಷ್ಠೆಯಿಲ್ಲ, ಪಾದೋದಕಪ್ರಸಾದನಿಷ್ಠೆಯಿಲ್ಲ,
ಈ ಪಂಚವಿಧ ಪ್ರಸನ್ನಸುಖವರಿಯದ ಮಲಸುಖಿಯು
ತಾನೊಂದು ಕಾರ್ಯವರಿದುಬಂದು ಕಾರಣಿಕಪುರುಷನೆಂದರೆ
ಈ ಹುಸಿ ಬಾಯಿಗೆ ಮುಂದೆ
ಕಸಮಲ ಹುಡಿಯ ತುಂಬುವುದೇ ಸಾಕ್ಷಿ.
ಇದು ಕಾರಣ, ಈ ಹುಸಿನಾಲಿಗೆಯನು
ಇದರ ಚೇತನವನು ಅದರಾಸ್ವಾದವನು
ಸುಟ್ಟು ಬಟ್ಟಿಟ್ಟಲ್ಲದೆ ಭಕ್ತಾದಿಕುಳವೆಂದರೆ
ಅಘೋರನರಕ ತಪ್ಪದು ಕಾಣಾ
ಗುರುನಿರಂಜನ ಚನ್ನಬಸವಲಿಂಗಾ.
Art
Manuscript
Music
Courtesy:
Transliteration
Aṅganeya saṅgamōhige guruniṣṭheyilla, liṅganiṣṭheyilla,
jaṅgamaniṣṭheyilla, pādōdakaprasādaniṣṭheyilla,
ī pan̄cavidha prasannasukhavariyada malasukhiyu
tānondu kāryavaridubandu kāraṇikapuruṣanendare
ī husi bāyige munde
kasamala huḍiya tumbuvudē sākṣi.
Idu kāraṇa, ī husināligeyanu
idara cētanavanu adarāsvādavanu
suṭṭu baṭṭiṭṭallade bhaktādikuḷavendare
aghōranaraka tappadu kāṇā
guruniran̄jana cannabasavaliṅgā.
ಸ್ಥಲ -
ಮಹೇಶ್ವರಸ್ಥಲದ
ಉಳಿದ ವಚನಗಳು