ಶರಣ ತನ್ನ ಮುಂದಣಾಚಾರಕ್ಕೆ
ಹಿಂದಣ ಸಂದಣಿಯ ನೇವರಿಸಿ ತಂದು,
ಗಂಭೀರಗತಿಮತಿಯೊಳ್ವೆರಸಿ,
ಅತಿ ರಹಸ್ಯದನುವಿನೊಳೆರಕವಾದ,
ನಿರುಪಮ ನಿಜಾನಂದದ ನಿಲುವಿಗೆ
ಆನು ಆನಂದದನುಕೂಲದವಸರಕ್ಕಡಿಯಿಡಲೆಡೆಯುಂಟೆ?
ಮಡದಿ ಪುರುಷರ ಮಾತು ಮಥನ ಘಾತದೊಳಗಿಲ್ಲದಿರ್ದನು,
ಗುರುನಿರಂಜನ ಚನ್ನಬಸವಲಿಂಗಾ
ನಿಮ್ಮ ಶರಣ ಅನುಪಮ ಚಾರಿತ್ರನು.
Art
Manuscript
Music
Courtesy:
Transliteration
Śaraṇa tanna mundaṇācārakke
hindaṇa sandaṇiya nēvarisi tandu,
gambhīragatimatiyoḷverasi,
ati rahasyadanuvinoḷerakavāda,
nirupama nijānandada niluvige
ānu ānandadanukūladavasarakkaḍiyiḍaleḍeyuṇṭe?
Maḍadi puruṣara mātu mathana ghātadoḷagilladirdanu,
guruniran̄jana cannabasavaliṅgā
nim'ma śaraṇa anupama cāritranu.
ಸ್ಥಲ -
ಶರಣಸ್ಥಲದ
ಉಳಿದ ವಚನಗಳು