ತನುಶುದ್ಧಿಯನರಿಯದೆ ಜೀವಭಾವಿಯಾಗಿ ಕೆಟ್ಟನು ವೇದಾಂತಿ.
ಪ್ರಾಣಶುದ್ಧಿಯನರಿಯದೆ ಭಿನ್ನಭಾವಿಯಾಗಿ ಕೆಟ್ಟನು ಸಿದ್ಧಾಂತಿ.
ಆತ್ಮಶುದ್ಧಿಯನರಿಯದೆ ಹುಸಿಕಲಾಭಾವಿಯಾಗಿ ಕೆಟ್ಟನು ಭಿನ್ನಯೋಗಿ.
ಈ ವಿಚಾರವಂತಿರಲಿ, ತ್ರಿವಿಧ ಶುದ್ಧಿಯನರಿದು,
ತ್ರಿವಿಧ ಭಕ್ತಿಪ್ರಭೆಯೊಳು ನಿಂದು,
ತ್ರಿವಿಧಲಿಂಗಕೃಪಾಂಬುವಿನಭಿಷೇಕಪರಿಣಾಮಿಯಾಗಿ ವರ್ತಿಸುವುದೇ
ಘನಗಂಭೀರ ವರ್ತನವಹುದೆಂಬೆ; ಆ ವರ್ತನದೊಳಗೆ
ಕರ್ತು ಚನ್ನವೃಷಭೇಂದ್ರಲಿಂಗವು
ಸುಖಮುಖಿಯಾಗಿಪ್ಪನು ಕಾಣಾ.
Art
Manuscript
Music
Courtesy:
Transliteration
Tanuśud'dhiyanariyade jīvabhāviyāgi keṭṭanu vēdānti.
Prāṇaśud'dhiyanariyade bhinnabhāviyāgi keṭṭanu sid'dhānti.
Ātmaśud'dhiyanariyade husikalābhāviyāgi keṭṭanu bhinnayōgi.
Ī vicāravantirali, trividha śud'dhiyanaridu,
trividha bhaktiprabheyoḷu nindu,
trividhaliṅgakr̥pāmbuvinabhiṣēkapariṇāmiyāgi vartisuvudē
ghanagambhīra vartanavahudembe; ā vartanadoḷage
kartu cannavr̥ṣabhēndraliṅgavu
sukhamukhiyāgippanu kāṇā.
ಸ್ಥಲ -
ಗೌರವಾಂಗಸ್ಥಲದ ವಚನಗಳು