Index   ವಚನ - 1198    Search  
 
ಹೇಮಮೊರಡಿಯ ಮೇಲೆಯಿರ್ದು ನಡೆಸುವನು ಗಂಭೀರನಲ್ಲ, ಬೆಳ್ಳಿಬೆಟ್ಟವನೇರಿ ನಡೆಸುವನು ಗಂಭೀರನಲ್ಲ, ಕಾಡಿಗೆಯ ಗಿರಿಯಹತ್ತಿ ನಡೆಸಿದರೆ ಗಂಭೀರನಲ್ಲ. ಮತ್ತೆಂತೆಂದೊಡೆ: ಆ ಗುಡ್ಡತ್ರಯವನುರುಹಿ ದೊಡ್ಡಭಾವವಳಿದಲ್ಲದೆ ಭಕ್ತನಾಗಬಾರದು. ಭಕ್ತನಾದ ಬಳಿಕ ಭಾವವೆಲ್ಲಿಹದೊ ನಿಜಭಕ್ತಿಜ್ಞಾನವೈರಾಗ್ಯಮೋಹಿ ಘನಲಿಂಗವಲ್ಲದೆ.