Index   ವಚನ - 1350    Search  
 
ಪ್ರಸಾದಲಿಂಗ ಉಳ್ಳನ್ನಕ್ಕರ, ಪ್ರಾಣಲಿಂಗವೆಂಬ ವಾರ್ತೆ ಭಂಗ ನೋಡಾ ಬಸವಣ್ಣಾ. ಬೀದಿಯಲ್ಲಿ ಕೊಡನನೊಡೆದು ಬಯಲನುಡುಗಿದಡೆ ಉಂಟೆ ಹೇಳಾ? ಗುಹೇಶ್ವರಲಿಂಗವ ಬೇರೆಮಾಡಿ ಅರಸಲುಂಟೆ ಬಸವಣ್ಣಾ?