Index   ವಚನ - 13    Search  
 
ಅಯ್ಯಾ, ಗುರುಚರಪರಭಕ್ತಗಣ ಷಣ್ಮತ ಮೊದಲಾದ ನೂರೊಂದು ಕುಲ ಹದಿನೆಂಟು ಜಾತಿಯವರೊಳಗಾಗಿ ಸಮಸ್ತರ ಹೊಲ ಮಾಳ ಗದ್ದೆ ಮನೆ ಮಠ ಮಳಿಗೆ ಮೊದಲಾಗಿ ತೆಂಗು ಬಾಳೆ ಬದನೆ ಅಂಜುರ ದ್ರಾಕ್ಷಿ ಚೂತಫಲ ನೇರಿಲಹಣ್ಣು ಹಲಸು ದಾಳಿಂಬ ರಾಯಿಬಿಕ್ಕೆ ಕಿತ್ತಳೆ ಕಿರಿನೆಲ್ಲಿ ಬೆಳವಲಹಣ್ಣು ಕಬ್ಬು ಕಡಲೆ ಸೌತೆ ಕಲ್ಲಂಗಡಿ ಕರುಬುಜ ಸೀತಿನಿ ಮೊದಲಾದ ಸಮಸ್ತ ರಸದ್ರವ್ಯವ ನೀತಿಯಿಂದ ಕೆಲವ ತಂದು, ಅನೀತಿಯಿಂದ ಕೆಲವ ತಂದು, ಚೋರತನದಿಂದ ಕೆಲವ ತಂದು, ರಂಡೆ ಮುಂಡೆ ಜಾರೆ ವೇಶಿ ಸೂಳೆ ಮೊದಲಾದವರಿಗೆ ಕೆಲವ ಕೊಟ್ಟು, ತಾನು ಕೆಲವ ಭುಂಜಿಸಿ, ಹಲ್ಲುಮುರಿದು ಸೋಟಿ ಹರಿದು, ಭವಕ್ಕೀಡಾಯಿತಯ್ಯ ಎನ್ನ ಜಿಹ್ವೇಂದ್ರಿಯವು. ಇಂತೀ ಕರ್ಮಪ್ರಾಣಿಗಳ ಸಂಗದಿಂದ ಮತಿಗೆಟ್ಟೆನಯ್ಯ. ಇನ್ನೆನಗೆ ಗತಿಯ ಪಥವ ತೋರಿ ನಿಮ್ಮ ಸದ್ಭಕ್ತ ಶಿವಶರಣ ನುಲಿಯ ಚಂದಯ್ಯಗಳ ತೊತ್ತಿನ ಉಗುಳ ತಾಂಬೂಲವ ಕೊಡಿಸಿ ಸಲಹಯ್ಯ ಸರ್ವಾಂತರ್ಯಾಮಿ ಶ್ರೀಗುರುಲಿಂಗಜಂಗಮವೆ, ಹರಹರ ಶಿವಶಿವ ಜಯಜಯ ಕರುಣಾಕರ, ಮತ್ಪ್ರಾಣನಾಥ ಮಹಾ ಶ್ರೀಗುರುಸಿದ್ಧಲಿಂಗೇಶ್ವರ.