Index   ವಚನ - 34    Search  
 
ಅಯ್ಯಾ, ಎನ್ನ ಓದಿನ ಓದೆಲ್ಲ ಗಿಳಿ ಓದಯ್ಯ. ಎನ್ನ ನಡೆನುಡಿಯೆಲ್ಲ ಶುನಿ ಸೂಕರ ಕುಕ್ಕುಟ ಗಾರ್ದಭನಂತಯ್ಯ. ಎನ್ನ ತಪವೆಲ್ಲ ಹರಿಯಜಸುರರಂತಯ್ಯ. ಎನ್ನ ಶೀಲವ್ರತಂಗಳೆಲ್ಲ ಮತ್ಸ್ಯಮಂಡೂಕನಂತಯ್ಯ. ಎನ್ನ ಆಚಾರವಿಚಾರವೆಲ್ಲ ಶ್ವೇತ ಮಾತಂಗನಂತಯ್ಯ. ಎನ್ನ ದಾನ ಧರ್ಮ ಪರೋಪಕಾರವೆಲ್ಲ ಕೊಡದ ಮಾರಿ ಕೊಡದ ಮಾರನಂತಯ್ಯ. ಎನ್ನ ಕಾಯವೆಲ್ಲ ಕಿರಾತನಂತಯ್ಯ, ಎನ್ನ ರೂಪೆಲ್ಲ ಪಿಶಾಚರೂಪಯ್ಯ. ಇನ್ನೆನಗೆ ನಿಮ್ಮ ಸದ್ಭಕ್ತಿಯ ಸಂಪತ್ತು ಎಂತುಟೊ ದೇವ? ನಿಮ್ಮ ಶರಣರ ಒಲುಮೆಯಿಂದೇನಾದಡಾಗಲಯ್ಯ. ಶ್ರೀಗುರುಲಿಂಗಜಂಗಮವೆ, ಹರಹರ ಶಿವಶಿವ ಜಯಜಯ ಕರುಣಾಕರ ಮತ್ಪ್ರಾಣನಾಥ ಮಹಾಶ್ರೀಗುರುಸಿದ್ಧಲಿಂಗೇಶ್ವರ.