ಅಂಡಜ ಪಿಂಡಜ ಬಿಂದುಜ ಉದಯವಾಗದಂದು,
ಆತ್ಮತತ್ವ ವಿದ್ಯಾತತ್ವ ಶಿವತತ್ವವೆಂಬ
ತತ್ವತ್ರಯಂಗಳ ನಾಮಸೀಮೆಗಳೇನುಯೇನೂ ಇಲ್ಲದಂದು,
ಆಚಾರ ಅನಾಚಾರವಿಲ್ಲದಂದು,
ಸೀಮೆ ನಿಸ್ಸೀಮೆಯಿಲ್ಲದಂದು,
ಗಮನ ನಿರ್ಗಮನವಿಲ್ಲದಂದು,
ಪುಣ್ಯಪಾಪ, ಕರ್ಮಧರ್ಮ,
ಸ್ವರ್ಗನರಕ, ಇಹಪರವಿಲ್ಲದಂದು
ಪರಾತ್ ಪರವಸ್ತು ನೀನೊಬ್ಬನೆ ಇರ್ದೆಯಲ್ಲ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Art
Manuscript
Music
Courtesy:
Transliteration
Aṇḍaja piṇḍaja binduja udayavāgadandu,
ātmatatva vidyātatva śivatatvavemba
tatvatrayaṅgaḷa nāmasīmegaḷēnuyēnū illadandu,
ācāra anācāravilladandu,
sīme nis'sīmeyilladandu,
gamana nirgamanavilladandu,
puṇyapāpa, karmadharma,
svarganaraka, ihaparavilladandu
parāt paravastu nīnobbane irdeyalla,
mahāliṅgaguru śivasid'dhēśvara prabhuvē.