Index   ವಚನ - 25    Search  
 
ಕಾರ್ಯನಲ್ಲ, ಕಾರಣನಲ್ಲ, ಕಲ್ಪಿತನಲ್ಲ, ನಿರ್ವಿಕಲ್ಪಿತನಲ್ಲ, ನೆನಹು ಮಾತ್ರದಿಂದ ಜಗವ ಸೃಷ್ಟಿಸಿದೆನೆಂಬ ಭಾವ ಬಣಿತೆಯವಲ್ಲ, ಇದಿರಿಂಗೆ ತಾನಿಲ್ಲ, ತನಗೆ ಇದಿರಾಗಿ ಒಂದು ವಸ್ತುವಿಲ್ಲ, ಪ್ರತಿಯಿಲ್ಲದಪ್ರತಿಮ, ಅನುಪಮ ಮಹಿಮ, ನಿನ್ನ ನಿಃಕಲನೆಂದೆಂಬರಯ್ಯ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.