Index   ವಚನ - 32    Search  
 
ಅಂಗವಾರು, ಲಿಂಗವಾರು, ಶಕ್ತಿಯಾರು, ಭಕ್ತಿಯಾರು, ಇಂತಿವೆಲ್ಲವ ನಿನ್ನಲ್ಲಿ ಗರ್ಭೀಕರಿಸಿಕೊಂಡು ಸಚ್ಚಿದಾನಂದ ನಿತ್ಯಪರಿಪೂರ್ಣ ನಿರಂಜನ ನೀನಾದ ಕಾರಣ ನಿನ್ನ, ನಿಃಕಲ ಶಿವತತ್ವವೆಂದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.