ನಿಃಕಲ ಶಿವತತ್ವದಲ್ಲಿ ಜ್ಞಾನಚಿತ್ತು ಉದಯವಾಯಿತ್ತು.
ಆ ಚಿತ್ತಿನಿಂದ ಆಕಾರ ಉಕಾರ ಮಕಾರಗಳೆಂಬ
ಅಕ್ಷರತ್ರಯಂಗಳಾದವು.
ಅಕಾರವೇ ನಾದ, ಉಕಾರವೇ ಬಿಂದು, ಮಕಾರವೇ ಕಳೆ.
ಇಂತೀ ತ್ರಿವಿಧಕ್ಕೆ ತಾಯಿ ಚಿತ್ತು.
ಇಂತೀ ನಾಲ್ಕು ಒಂದಾದಲ್ಲಿ ಓಂಕಾರವೆಂಬ ಪ್ರಣವದುತ್ಪತ್ತಿಯಾಯಿತ್ತು.
ಆ ಓಂಕಾರವೆಂಬ ಪ್ರಣವವೇ,
ಅಖಂಡ ಪರಿಪೂರ್ಣ ಗೋಳಕಾಕಾರ ತೇಜೋಮೂರ್ತಿಯಪ್ಪ
ಮಹಾಲಿಂಗನೋಡಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Art
Manuscript
Music
Courtesy:
Transliteration
Niḥkala śivatatvadalli jñānacittu udayavāyittu.
Ā cittininda ākāra ukāra makāragaḷemba
akṣaratrayaṅgaḷādavu.
Akāravē nāda, ukāravē bindu, makāravē kaḷe.
Intī trividhakke tāyi cittu.
Intī nālku ondādalli ōṅkāravemba praṇavadutpattiyāyittu.
Ā ōṅkāravemba praṇavavē,
akhaṇḍa paripūrṇa gōḷakākāra tējōmūrtiyappa
mahāliṅganōḍā,
mahāliṅgaguru śivasid'dhēśvara prabhuvē.