ಮಹಾಲಿಂಗವೆಂದುಂಟು. ಅದೆಂತಾದುದಯ್ಯಾ ಎಂದಡೆ,
ಸ್ವರಾಕ್ಷರ ವಿಕಲಾಕ್ಷರ ವ್ಯಾಪಕಾಕ್ಷರವೆಂದು ಮೂರು ಪ್ರಕಾರ.
ಸ್ವರಾಕ್ಷರವೆಲ್ಲ ನಾದ ಸಂಬಂಧ.
ವಿಕಲಾಕ್ಷರವೆಲ್ಲ ಬಿಂದು ಸಂಬಂಧ.
ವ್ಯಾಪಕಾಕ್ಷರವೆಲ್ಲ ಕಳಾ ಸಂಬಂಧ.
ನಾದವೇ ಆಕಾರ, ಬಿಂದುವೆ ಉಕಾರ, ಕಳೆಯೆ ಮಕಾರ.
ಈ ನಾದ ಬಿಂದು ಕಳೆಗಳ ಗರ್ಬೀಕರಿಸಿಕೊಂಡಿರ್ಪುದು ಚಿತ್ತು.
ಆ ಚಿತ್ ಪ್ರಣಮಸ್ವರೂಪವೆ, ಅದ್ವೈತಾನಂದದಿಂದ ಸಂಪೂರ್ಣವನುಳ್ಳ
ಆದಿ ಮಹಾಲಿಂಗವು, ಅನುಪಮ ಲಿಂಗವು, ಅನಾಮಯ ಲಿಂಗವು,
ಅದ್ವಯ ಲಿಂಗವು, ಪರಮ ಲಿಂಗವು, ಪರಾಪರ ಲಿಂಗವು,
ಪಿಂಡಾಂಡವನೊಳಕೊಂಡ ಅಖಂಡ ಲಿಂಗವು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Art
Manuscript
Music
Courtesy:
Transliteration
Mahāliṅgavenduṇṭu. Adentādudayyā endaḍe,
svarākṣara vikalākṣara vyāpakākṣaravendu mūru prakāra.
Svarākṣaravella nāda sambandha.
Vikalākṣaravella bindu sambandha.
Vyāpakākṣaravella kaḷā sambandha.
Nādavē ākāra, binduve ukāra, kaḷeye makāra.
Ī nāda bindu kaḷegaḷa garbīkarisikoṇḍirpudu cittu.
Ā cit praṇamasvarūpave, advaitānandadinda sampūrṇavanuḷḷa
ādi mahāliṅgavu, anupama liṅgavu, anāmaya liṅgavu,
advaya liṅgavu, parama liṅgavu, parāpara liṅgavu,
piṇḍāṇḍavanoḷakoṇḍa akhaṇḍa liṅgavu kāṇā,
mahāliṅgaguru śivasid'dhēśvara prabhuvē.