Index   ವಚನ - 49    Search  
 
ಅನಾದಿಕರ್ಮಿಗಳಾಗಿ, ಅವಾಂತರ ಮುಕ್ತರಾದೆವೆಂದು ಭೇದವಮಾಡಿ ನುಡಿವವರೆಲ್ಲ ಭವಬಾಧೆಯಲ್ಲಿ ಮುಳುಗಿ, ಭವಪಾಶಂಗಳು ಹರಿಯದೆಯಿಪ್ಪ ಪಶುಭಾವದ ಪರಿಯ ನೋಡಾ. ಇದು ಕಾರಣ, ಆದಿಯಲ್ಲಿಯು ಮುಕ್ತರು, ಅನಾದಿಯಲ್ಲಿಯು ಮುಕ್ತರು, ಎಂದೆಂದೂ ಮುಕ್ತರಯ್ಯ ನಿಮ್ಮ ಶರಣರು, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.