•  
  •  
  •  
  •  
Index   ವಚನ - 138    Search  
 
ತ್ರಿವಿಧದ ನಿತ್ಯವ, ತ್ರಿವಿಧದ ಅನಿತ್ಯವ ಬಲ್ಲವರಾರೊ? ತ್ರಿವಿಧಕ್ಕೆ ತ್ರಿವಿಧವನಿತ್ತು ತ್ರಿವಿಧ ಪ್ರಸಾದವ ಕೊಳ್ಳಬಲ್ಲಡೆ, ಆತನು ತ್ರಿವಿಧನಾಥನೆಂಬೆನು, ಆತನು ವೀರನೆಂಬೆನು. ಆತನು ಧೀರನೆಂಬೆನು, ಆತನು ಗುಹೇಶ್ವರಲಿಂಗದಲ್ಲಿ ಅಚ್ಚಪ್ರಸಾದಿಯೆಂಬೆನು.
Transliteration Trividhada nityava, trividhada anityava ballavarāro? Trividhakke trividhavanittu trividha prasādava koḷḷaballaḍe, ātanu trividhanāthanembenu, ātanu vīranembenu. Ātanu dhīranembenu, ātanu guhēśvaraliṅgadalli accaprasādiyembenu.
English Translation 2 Whether the Three are eternal or no, Who can tell? If one gain the triple grace By triple service to the Three, Him I call Lord off the Three, Him brave, him resolute, Him a partaker of the grace Of Guheśvara!
Hindi Translation त्रिविधा नित्य, त्रिविध अनित्य इनको कौन जानते हैं ? त्रिविध को त्रिविध देकर त्रिविध प्रसाद पाये तो ---- उसे त्रिविध नाथ कहूँगा, उसे वीर कहूँगा , उसे धीर कहूँगा। उसे गुहेश्वर लिंग में शुद्ध प्रसादी कहूँगा। Translated by: Eswara Sharma M and Govindarao B N
Telugu Translation அழியா மூன்றையும் அழியும் மூன்றையும் வல்லவர் எவரோ?
ಶಬ್ದಾರ್ಥಗಳು ಅಚ್ಚ = ಶುದ್ದ; ಧೀ = ಪ್ರಜ್ಞೆ; ಧೀರ = ಲಿಂಗ ಹಾಗೂ ಪ್ರಾಸಾದಿಕ ಪ್ರಜ್ಞೆಯಲ್ಲಿ ಸಂತೋಷಿಸುವವ; ರ = ರಮಿಸುವ; Written by: Sri Siddeswara Swamiji, Vijayapura