Index   ವಚನ - 105    Search  
 
ಅಯ್ಯಾ, ವಾಕ್ಕನೂ ಮೀರಿ, ಮನಸ್ಸನೂ ಮೀರಿ, ಅಕ್ಷರಂಗಳನೂ ಮೀರಿ, ಜ್ಞಾನವನೂ ಮೀರಿ ತೋರುವ ನಿರುಪಮ ವಸ್ತುವೆಂಬುತ್ತಿದ್ದಿರಿ: ಅದು ರೂಪಾಗಿ, ಎನ್ನ ಕರಸ್ಥಲಕ್ಕೆ ಇಷ್ಟ, ಮನಸ್ಥಲಕ್ಕೆ ಪ್ರಾಣವಾಗಿ, ಭಾವದಲ್ಲಿ ಭರಿತವಾಗಿ, ತೀವಿ ಪರಿಪೂರ್ಣವಾಗಿ, ಎಡೆಕಡೆಯಿಲ್ಲದೆಯಿಪ್ಪ ಭೇದವ ಕರುಣಿಸಿದಿರಿಯಯ್ಯ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.