Index   ವಚನ - 119    Search  
 
ವಿಷಯ ರತಿಯುಳ್ಳವಂಗೆ ಈಶ್ವರ ರತಿಯಿನ್ನೆಲ್ಲಿಯದೋ? ಅಂಗವಿಕಾರವುಳ್ಳವರಿಗೆ ಲಿಂಗಾಂಗ ಸಂಬಂಧವಿನ್ನೆಲ್ಲಿಯದೋ ಅಯ್ಯ? ಮಾಯಾಪಟಲ ಹರಿಯದ ಹಿರಿಯರಿಗೆ ಮಹದ ಮಾತೇಕೋ? ಸಂಸಾರ ಸಂಗಾನುಭಾವದ ದುಶ್ಚರಿತ್ರದೊಳಗಿಪ್ಪವರಿಗೆ ಲಿಂಗಾನುಭಾವದ ಮಾತೇಕಿರೋ? ಬಿಡು ಬಿಡಾ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.